ಸೇಂಟ್ ಕಿಟ್ಸ್ ಮತ್ತು ನೆವಿಸ್ ಒಕ್ಕೂಟ (ಅಥವಾ ಸೇಂಟ್ ಕ್ರಿಸ್ಟೊಫರ್ ಮತ್ತು ನೆವಿಸ್ ಒಕ್ಕೂಟ ), ಕೆರಿಬ್ಬಿಯನ್ ಪ್ರದೇಶದ ಲೀವರ್ಡ್ ದ್ವೀಪಗಳಲ್ಲಿ ಇರುವ ಎರಡು ದ್ವೀಪಗಳ ದೇಶ. ಉತ್ತರ ಅಮೇರಿಕ ಖಂಡದ ಅತ್ಯಂತ ಚಿಕ್ಕ ಮತ್ತು ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಇದು.